ಅಭಿಮನ್ಯು 2

	ಕಾಶ್ಮೀರದ ರಾಜ, ಕ್ಷೇಮಗುಪ್ತನ ಮಗ. 10ನೆಯ ಶತಮಾನದ ಉತ್ತರಾರ್ಧದಲ್ಲಿ 14 ವರ್ಷ ರಾಜ್ಯವಾಳಿದ. ಈತ ಅಭಿಮನ್ಯುಪುರ ನಿರ್ಮಿಸಿದ ಬಗ್ಗೆ ಉಲ್ಲೇಖವಿದೆ. ಈತ ಹೆಸರಿಗೆ ಮಾತ್ರ ರಾಜನಾಗಿದ್ದು ಇವನ ತಾಯಿ ಮಹಾರಾಣಿ ದಿದ್ದ ಸರ್ವಾಧಿಕಾರ ನಡೆಸಿದಳು. 									
(ಪಿ.ಎಲ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ